Please assign a menu to the primary menu location under menu

National

ರಾಮನನ್ನು ವಿರೋಧಿಸಿದವರು ನತದೃಷ್ಟದಿಂದ ಬಳಲಿದ್ದಾರೆ: ಯೋಗಿ ಆದಿತ್ಯನಾಥ

ರಾಮನನ್ನು ವಿರೋಧಿಸಿದವರು ನತದೃಷ್ಟದಿಂದ ಬಳಲಿದ್ದಾರೆ: ಯೋಗಿ ಆದಿತ್ಯನಾಥ

ಲಕ್ನೋ: “ಶ್ರೀರಾಮ ನಂಬಿಕೆಯ ಪ್ರತಿರೂಪ. ಆತನನ್ನು ವಿರೋಧಿಸಿದವರು ದುರದೃಷ್ಟ ಎದುರಿಸಿದ್ದಾರೆ’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಸುದ್ದಿವಾಹಿನಿಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮರಾಜ್ಯವೆಂದರೆ ದೇವತಾಶಾಸ್ತ್ರದ ರಾಜ್ಯವಲ್ಲ. ಬಡವರಿಗೆ ಎಲ್ಲ ಸೌಲಭ್ಯ ಒದಗಿಸುವ ಆಡಳಿತವಿರುವ ರಾಜ್ಯವೆಂದರ್ಥ ಎಂದಿದ್ದಾರೆ. ಲಖೀಂಪುರ ಖೇರಿ ಪ್ರಕರಣದ ಬಗ್ಗೆಯೂ ಮಾತನಾಡಿದ ಅವರು, ರಾಜ್ಯದಲ್ಲಿ ಯಾರು ತಪ್ಪು ಮಾಡಿದರೂ, ಅವರಿಗೆ ಶಿಕ್ಷೆ ಆಗಿಯೇ ಆಗುತ್ತದೆ ಎಂದಿದ್ದಾರೆ. ಹಾಗೆಯೇ ಭಾರತ-ಪಾಕ್‌ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ಸೋತಿದ್ದನ್ನು ಸಂಭ್ರಮಿಸಿದವರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ

ದೀಪಾವಳಿಗೆ 9 ಲಕ್ಷ ದೀಪ:
ದೀಪಾವಳಿಗೆ ಅಯೋಧ್ಯೆಯಲ್ಲಿ 9 ಲಕ್ಷ ದೀಪಗಳನ್ನು ಬೆಳಗಿಸಿ ದಾಖಲೆ ನಿರ್ಮಿಸುವುದಾಗಿ ಯೋಗಿ ತಿಳಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ಮತ್ತು ರಾಜಕೀಯ ನಾಯಕರು ಬಡವರೊಂದಿಗೆ ದೀಪಾವಳಿ ಆಚರಿಸುವಂತೆ ಅವರು ಮನವಿ ಮಾಡಿದ್ದಾರೆ.

ರಾಮ ಮಂದಿರಕ್ಕೆ ಗಂಗಾ, ಕಾಬೂಲ್‌ ನದಿ ನೀರು:
ಇದೇ ವೇಳೆ ಯೋಗಿ ಅವರು ಅಯೋಧ್ಯೆಯ ರಾಮಮಂದಿರಕ್ಕೆ ಗಂಗಾ ಮತ್ತು ಅಫ್ಘಾನಿಸ್ತಾನದ ಕಾಬೂಲ್‌ ನದಿಯ ನೀರನ್ನು ಅರ್ಪಿಸಿದರು. ತಾಲಿಬಾನ್‌ ಆಕ್ರಮಿತ ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವೇ ಇಲ್ಲದಂತಾಗಿರುವ ಸಮಯದಲ್ಲೂ ಅಲ್ಲಿನ ಬಾಲಕಿಯೊಬ್ಬಳು ಕಾಬೂಲ್‌ ನದಿ ನೀರನ್ನು ಪ್ರಧಾನಿ ನರೇಂದ್ರ ಮೋದಿಗೆ ಕಳುಹಿಸಿಕೊಟ್ಟಿರುವುದಾಗಿ ಅವರು ತಿಳಿಸಿದರು.


Leave a Reply