Please assign a menu to the primary menu location under menu

State

ಡಿಜಿಟಲ್​ ಮಾಧ್ಯಮದಲ್ಲಿ ಶ್ರೀ ಜಗನ್ನಾಥ ದಾಸರು ಪೌರಾಣಿಕ ಚಿತ್ರ ಬಿಡುಗಡೆ


ಹರಿದಾಸರ ಕುರಿತು 50 ವರ್ಷಗಳ ಬಳಿಕ ಬಿಡುಗಡೆಯಾದ ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆ

ಕನ್ನಡ ಚಿತ್ರರಂಗದಲ್ಲಿ ಪ್ರಖ್ಯಾತ ವಿದ್ವಾಂಸ ಹಾಗೂ ಹರಿದಾಸರ ಕುರಿತ ಚಿತ್ರ ಬಿಡುಗಡೆಯಾಗಿ 50 ವರ್ಷಗಳೇ ಗತಿಸಿದ್ದವು. ಇದಾದ ನಂತರದಲ್ಲಿ ಇದೇ ಮೊದಲ ಬಾರಿಗೆ ಶ್ರೀ ಜಗನ್ನಾಥ ದಾಸರು ಎಂಬ ದಾಸಶ್ರೇಷ್ಠರ ಕುರಿತ ಚಿತ್ರ 2021ರ ನವೆಂಬರ್​ 11ರಂದು ಡಿಜಿಟಲ್​ ಮಾಧ್ಯಮದಲ್ಲಿ ಬಿಡುಗಡೆಯಾಗಿದೆ. 14 ಮತ್ತು 15ನೇ ಶತಮಾನದಲ್ಲಿ ಭಕ್ತಿ ಮಾರ್ಗ ಔನತ್ಯದಲ್ಲಿದ್ದಾಗ ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟ ಕೊಡುಗೆ ನೀಡಿದ ಶ್ರೀ ಪುರಂದರ ದಾಸರು, ಶ್ರೀ ವಿಜಯ ದಾಸರು ಮತ್ತು ಶ್ರೀ ಗೋಪಾಲ ದಾಸರ ಸಾಲಿಗೆ ಸೇರ್ಪಡೆಗೊಂಡ ಶ್ರೀ ಜಗನ್ನಾಥ ದಾಸರು ದಾಸಶ್ರೇಷ್ಠ ಚತುಷ್ಟಯರು ಎನಿಸಿಕೊಂಡಿದ್ದಾರೆ. 50 ವರ್ಷಗಳ ಹಿಂದೆ ವರನಟ ಡಾ. ರಾಜಕುಮಾರ್​ ನಟಿಸಿದ್ದ ಶ್ರೀ ಪುರಂದರ ದಾಸ ಚಿತ್ರ ಬಿಡುಗಡೆಯಾಗಿತ್ತು. ಆನಂತದಲ್ಲಿ ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವ ದಾಸಶ್ರೇಷ್ಠರ ಕುರಿತ ಮೊದಲ ಚಿತ್ರ ಎಂಬ ಹೆಗ್ಗಳಿಕೆ ಶ್ರೀ ಜಗನ್ನಾಥ ದಾಸರು ಚಿತ್ರದ್ದಾಗಿದೆ.

ಶ್ರೀ ಜಗನ್ನಾಥ ದಾಸರು ಚಿತ್ರ ಮಾತಾಂಬುಜಾ ಮೂವೀಸ್​ ಎಂಬ ಬ್ಯಾನರ್​ನಲ್ಲಿ ನಿರ್ಮಾಣಗೊಂಡಿದೆ. ತ್ರಿವಿಕ್ರಮ ಜೋಷಿ ಮತ್ತು ಡಾ. ಮಧುಸೂದನ್​ ಹವಲ್ದಾರ್​ ಅವರ ನೇತೃತ್ವದ ಮೈತ್ರಿ ಹೆರಿಟೇಜ್​ ಚಿತ್ರವನ್ನು ನಿರ್ಮಿಸಿದೆ. ಡಾ. ಹವಾಲ್ದಾರ್​ ಈ ಚಿತ್ರದ ನಿರ್ದೇಶಕರು. ತ್ರಿವಿಕ್ರಮ ಜೋಷಿ, ಮಾರ್​ಟೆಕ್​ ಉದ್ಯಮಿ ಹಾಗೂ ಮನೋಜ್ಞ ಅಭಿನಯಕ್ಕೆ ಪ್ರಖ್ಯಾತರಾದ ಪ್ರಭಂಜನ ದೇಶಪಾಂಡೆ ಚಿತ್ರದ ತಾರಾಗಣದಲ್ಲಿ ಇದ್ದಾರೆ. ನಟ ಶರತ್​ ಜೋಷಿ ಅವರ ಚೊಚ್ಚಲ ಸಿನಿಮಾ ಇದಾಗಿದೆ. ಹಿರಿಯ ನಟಿ ಶ್ರೀಮತಿ ಪದ್ಮಕಲಾ ಅವರು ಈ ಚಿತ್ರದಲ್ಲಿ ಪಾತ್ರನಿರ್ವಹಣೆಯ ಜತೆಗೆ ಕಲಾ ನಿರ್ದೇಶಕರಾಗಿಯೂ ದುಡಿದಿದ್ದು, ಚಿತ್ರಕ್ಕೆ ಕಲಾತ್ಮಕ ಸ್ಪರ್ಶ ಒದಗಿಸಿದ್ದಾರೆ. www.kott.tv ಎಂಬ ಕನ್ನಡ ಚಲನಚಿತ್ರಗಳ ಮತ್ತು ಮನೋರಂಜನೆ ಮಾಧ್ಯಮದಲ್ಲಿ ಜನಪ್ರಿಯವಾಗಿರುವ ಒಟಿಟಿಯಲ್ಲಿ ಚಿತ್ರ ಜಾಗತಿಕವಾಗಿ ಬಿಡುಗಡೆಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದ ಸಹನಿರ್ಮಾಪಕ ಹಾಗೂ ನಟ ತ್ರಿವಿಕ್ರಮ ಜೋಷಿ, “ಐತಿಹಾಸಿಕ ಮತ್ತು ಪೌರಾಣಿಕ ಕಥಾಹಂದರವನ್ನು ಹೊಂದಿರುವ ಚಿತ್ರವನ್ನು ಇದೇ ಮೊದಲ ಬಾರಿಗೆ ಜಾಗತಿಕಮಟ್ಟದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಚಿತ್ರಕ್ಕೆ ಈವರೆಗೆ ಸಿಕ್ಕಿರುವ ಸಕಾರಾತ್ಮಕ ಪ್ರತಿಕ್ರಿಯೆಯಿಂದ ಸಂತುಷ್ಟನಾಗಿದ್ದೇನೆ. ಭವಿಷ್ಯದ ದೃಷ್ಟಿಯಿಂದ ಈ ಚಿತ್ರ ದಿಕ್ಸೂಚಿ ಆಗಲಿದೆ ಎಂಬುದು ಸ್ಪಷ್ಟ. ಮುಂದಿನ ಪೀಳಿಗೆಯವರಿಗಾಗಿ ನಮ್ಮ ಸಂಸತಿ ಮತ್ತು ಪರಂಪರೆಯಲ್ಲಿ ಆಳವಾಗಿ ಬೇರೂರಿರುವ ಕನ್ನಡ ಹರಿದಾಸರ ಕುರಿತ ಸರಣಿ ಚಿತ್ರಗಳನ್ನು ನಿರ್ಮಿಸಲು ಚಿತ್ರದ ಯಶಸ್ಸು ಸ್ಫೂರ್ತಿ ತಂದಿದೆ. ಕರ್ನಾಟಕ ನೆಲಮೂಲದ ಕಥೆಗಳನ್ನು ಜಾಗತಿಕ ಮಟ್ಟದಲ್ಲಿ ಹೇಳುವ ಪ್ರಯತ್ನ ನಮ್ಮದಾಗಿದೆ’ ಎಂದು ಹೇಳುತ್ತಾರೆ.

ಚಿತ್ರ ನಿರ್ಮಾಣದ ಅನುಭವನಗಳನ್ನು ಹಂಚಿಕೊಂಡ ಡಾ. ಮಧುಸೂದನ್​ ಹವಾಲ್ದಾರ್​, “ಚಿತ್ರಕ್ಕೆ ಪ್ರಾರಂಭಿಕ ಹಂತದಲ್ಲಿ ಸಿಕ್ಕಿರುವ ಪ್ರೋತ್ಸಾಹ ಸಂತಸ ತಂದಿದೆ. ಕಳೆದ ಎರಡು ವರ್ಷಗಳಿಂದಲೂ ನನ್ನ ಮನಸ್ಸಿನಲ್ಲಿ ಓಡುತ್ತಿದ್ದ ಕಥೆಯನ್ನು ತುಂಬಾ ನಿರೀೆಯಿಟ್ಟುಕೊಂಡು ಹೇಳಿದ್ದೇವೆ. ವಾಣಿಜ್ಯಾತ್ಮಕವಾಗಿ ಲಾಭ ತಂದುಕೊಡುವ ರೀತಿಯಲ್ಲಿ ಶ್ರೀ ಜಗನ್ನಾಥ ದಾಸರ ಕಥೆಯನ್ನು ಚಿತ್ರಮಾಧ್ಯಮದಲ್ಲಿ ತೋರಿಸಲು ಸಾಧ್ಯ ಎಂಬ ನಂಬಿಕೆ ಯಾರಲ್ಲೂ ಇರಲಿಲ್ಲ. ಆದರೂ ಇಂಥ ಒಂದು ತೊಂದರೆಯನ್ನು ತೆಗೆದುಕೊಂಡೆ. ಚಿತ್ರೀಕರಣ ತಾಣದ ಆಯ್ಕೆ, ಚಿತ್ರೀಕರಣಕ್ಕಾಗಿ ಉಪಕರಣಗಳ ಬಳಕೆ, ಧ್ವನಿ ಮತ್ತು ವಿಎ್​ಎಕ್ಸ್​ ಸೇರಿ ಯಾವುದೇ ವಿಷಯವಾಗಿಯೂ ಸುತಾರಾಂ ಹೊಂದಾಣಿಕೆ ಮಾಡಿಕೊಳ್ಳದೆ ಮುಂದುವರಿದೆ. 250 ವರ್ಷಗಳ ಹಿಂದಿನ ಕರ್ನಾಟಕದ ಮರುಸೃಷ್ಟಿ ಒಂದು ಚೈತನ್ಯದಾಯಕ ಅನುಭವ ಒದಗಿಸಿದ್ದಂತಲೂ ಸುಳ್ಳಲ್ಲ. ಚಿತ್ರದಲ್ಲಿ ನಟ, ನಟಿಯರು ಅಮೋವಾಗಿ ನಟಿಸಿದ್ದಾರೆ. ಚಿತ್ರದ ಸಂಗೀತ ಮತ್ತು ಹಿನ್ನೆಲೆ ಸಂಗೀತ ಇಂಪಾಗಿ ಮೂಡಿ ಬಂದಿದ್ದು, ಚಿತ್ರಕ್ಕೆ ಯಶಸ್ಸಿಗೆ ಬಹುದೊಡ್ಡ ಕೊಡುಗೆ ನೀಡುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ’ ಎಂದು ತಿಳಿಸುತ್ತಾರೆ.

ಶ್ರೀ ಜಗನ್ನಾಥ ದಾಸರು ಚಿತ್ರಕಥೆ ಸಮ್ಮೋಹಕವಾಗಿದೆ. ಪಂಡಿತರು, ವಿದ್ವಾಂಸರೆಲ್ಲರೂ ಸಂಸತದಲ್ಲೇ ಸಂವಹನ ನಡೆಸುತ್ತಿದ್ದ ಕಾಲಟ್ಟದಲ್ಲಿ ಕನ್ನಡ ಭಾಷೆ ತನ್ನ ಅಸ್ತಿತ್ವ ಮತ್ತು ಮಹತ್ವವನ್ನು ಉಳಿಸಿಕೊಂಡ ಬಂದ ರೀತಿಯ ಚಿತ್ರದಲ್ಲಿ ಬಿಂಬಿತವಾಗಿದೆ. ಕನ್ನಡ ಭಾಷೆಯಲ್ಲೇ ಭಕ್ತೀಗಿತೆಗಳನ್ನು ರಚಿಸುವ ಮೂಲಕ ಶ್ರೀ ಜಗನ್ನಾಥ ದಾಸರು ಸೇರಿ ಇತರರು ಜ್ಞಾನದೀವಿಗೆಯ ಬೆಳಕು ಹಾಗೂ ಭಾಷಾ ಶ್ರೀಮಂತಿಕೆಯನ್ನು ಜಗದಗಲಕ್ಕೂ ಹರಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಖಾಂಡ ಪಾಂಡಿತ್ಯದ ಹಮ್ಮುಬಿಮ್ಮುಗಳನ್ನು ಕಳಚಿ, ಹಲವು ಕಷ್ಟಕೋಟಲೆಗಳ ನಡುವೆ ಪರಿವರ್ತನೆಯ ಹಾದಿಯಲ್ಲಿ ನಡೆದು ಬಂದು, ಕನ್ನಡದ ಹರಿದಾಸರಾಗಿ ಉನ್ನತ ಸ್ಥಾನಮಾನ ಗಳಿಸಿಕೊಂಡ ಶ್ರೀ ಜಗನ್ನಾಥ ದಾಸರ ಜೀವನಚರಿತೆ ಚಿತ್ರದಲ್ಲಿ ಮನೋಜ್ಞವಾಗಿ ಮೂಡಿಬಂದಿದೆ. ತಾಂತ್ರಿಕ ಶ್ರೀಮಂತಿಕೆಯ ಜತೆಗೆ ಗುಣಮಟ್ಟದ ನಿರ್ಮಾಣ ಚಿತ್ರಕ್ಕೆ ವಿಶಿಷ್ಟ ಸ್ಪರ್ಶ ತಂದುಕೊಟ್ಟಿದೆ.

ಹಂಪಿ, ಆನೆಗೊಂದಿ, ಗಂಗಾವತಿ ಮತ್ತು ಸುತ್ತಮುತ್ತಲ ಚಿತ್ತಾಕರ್ಷಕ ಅರಣ್ಯ, ಗುಡ್ಡಗಾಡು ಪ್ರದೇಶ ಸೇರಿ ಕರ್ನಾಟಕ ಹಲವು ಭಾಗಗಳಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ನಟ, ನಟಿಯರ ಪಾತ್ರನಿರ್ವಹಣೆ ಬಗ್ಗೆ ಎಲ್ಲಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಡಿ. ವಿಜಯಕೃಷ್ಣ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತದ ಇಂಪು ಮನಸೊರೆಗೊಳ್ಳುತ್ತಿದೆ. ಟಠಿಠಿ.ಠಿಡ ಚಿತ್ರವನ್ನು ತನ್ನ  kott.tv ವೆಬ್​ಸೈಟ್​ ಅಮೇರಿಕ ಮತ್ತಿತರ ರಾಷ್ಟ್ರಗಳಲ್ಲಿ ಪ್ರದರ್ಶಿಸುತ್ತಿದೆ. ಇಂಥ ಚಿತ್ರಗಳ ನಿರ್ಮಾಣಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಪೌರಾಣಿಕ ಚಿತ್ರಪ್ರೇಮಿಗಳಿಂದ ದೇಣಿಗೆ ಸಂಗ್ರಹಿಸಲು ಚಿತ್ರದ ನಿರ್ಮಾಪಕರು www.kott.tv ಸೇರಿ ಎರಡು ವೆಬ್​ಸೈಟ್​ಗಳಿಗೆ ಅನುಮತಿ ನೀಡಿದ್ದಾರೆ. ಈ ಕೆಳಗಿನ ಎರಡು ಲಿಂಕ್​ಗಳ ಮೂಲಕ ಯಾವುದೇ ದೇಶದ ಕರೆನ್ಸಿಯೊಂದಿಗೆ ದೇಣಿಗೆಯನ್ನು ನೀಡಬಹುದಾಗಿದೆ.


Leave a Reply