Please assign a menu to the primary menu location under menu

National

“ಶಿವಾಜಿ ನಾಡಲ್ಲಿ ಮಮತಾ ಬೇಗಂಗೆ ಸ್ಥಾನವಿಲ್ಲ’ : ಗೋವಾದಲ್ಲಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ

“ಶಿವಾಜಿ ನಾಡಲ್ಲಿ ಮಮತಾ ಬೇಗಂಗೆ ಸ್ಥಾನವಿಲ್ಲ’ : ಗೋವಾದಲ್ಲಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ

ಪಣಜಿ: ಪರಶುರಾಮ ಮತ್ತು ಶಿವಾಜಿ ಮಹಾರಾಜರ ನಾಡಾಗಿರುವ ಗೋವಾದಲ್ಲಿ ಮಮತಾ ಬೇಗಂಗೆ ಸ್ಥಾನ ಕೊಡಲಾಗದು ಎಂದು ಬಿಜೆಪಿ ಸಂಸದ, ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಗೋವಾದಲ್ಲಿ ಮುಂಬರುವ ಚುನಾವಣೆಯ ಪ್ರಯುಕ್ತ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ತೇಜಸ್ವಿ ಅವರು ಈ ಮಾತನ್ನು ಹೇಳಿದ್ದಾರೆ. “ನಮಗೆ 2022ರ ಚುನಾವಣೆಯಲ್ಲಿ ಬಹುಮತ ಬೇಕು. ಏಕೆಂದರೆ ದೇಶ ಯುವ ನಾಯಕತ್ವದ ಬಗ್ಗೆ ನಂಬಿಕೆ ಇಟ್ಟಿದೆ. ಪಶ್ಚಿಮ ಬಂಗಾಳದ ಮಮತಾ ಬೇಗಂ ನಮ್ಮ ಶಿವಾಜಿ ಮಹಾರಾಜರ ನಾಡಿಗೆ ಬೇಕಿಲ್ಲ’ ಎಂದು ಹೇಳಿದ್ದಾರೆ.

ಇದೇ ವೇಳೆ ಆಮ್‌ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್‌ ಬಗ್ಗೆಯೂ ಮಾತನಾಡಿದ ತೇಜಸ್ವಿ, “ಐಐಟಿ ಇಂಜಿನಿಯರ್‌ ನಾಯಕರ ನಾಡಾದ ಗೋವಾದಲ್ಲಿ ನಕಲಿ ಐಐಟಿ ಇಂಜಿನಿಯರ್‌ಗಳು ಬೇಕಾಗಿಲ್ಲ. ಗೋವಾವನ್ನು ದೆಹಲಿಯಿಂದ ಅಥವಾ ಕೋಲ್ಕತದಿಂದ ಆಳ್ವಿಕೆ ಮಾಡದೆ, ನಮ್ಮ ಗೋವಾದವರೇ ಆಡಳಿತ ನಡೆಸುವಂತಾಗಬೇಕು’ ಎಂದಿದ್ದಾರೆ.


Leave a Reply