Please assign a menu to the primary menu location under menu

National

ಏನೇ ಆದರೂ ಅಳಬೇಡ ಎಂದಿದ್ದರು ಅಜ್ಜಿ ಇಂದಿರಾ : ರಾಹುಲ್‌

ಏನೇ ಆದರೂ ಅಳಬೇಡ ಎಂದಿದ್ದರು ಅಜ್ಜಿ ಇಂದಿರಾ : ರಾಹುಲ್‌

ನವದೆಹಲಿ:  ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ ಪುಣ್ಯಸ್ಮರಣೆಯ ದಿನವಾದ ಭಾನುವಾರ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ತಮ್ಮ ಅಜ್ಜಿ ಇಂದಿರಾರ ಕುರಿತು ವಿಶೇಷ ವಿಡಿಯೋವೊಂದನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದಾರೆ.

“ನನ್ನ ಅಜ್ಜಿ ಸಾಯುವುದಕ್ಕೆ ಒಂದೆರೆಡು ಗಂಟೆ ಮೊದಲು ನನ್ನೊಂದಿಗೆ ಮಾತನಾಡಿ, ನನಗೆ ಏನೇ ಆದರೂ ಅಳಬಾರದು ಎಂದಿದ್ದರು. ನನಗೆ ಆಗ ಏನೂ ಅರ್ಥ ಆಗಿರಲಿಲ್ಲ. ಇದಾದ 2-3 ಗಂಟೆಗಳಲ್ಲೇ ಅವರು ಕೊನೆಯುಸಿರೆಳೆದಿದ್ದರು. ಅವರ ಅಂತ್ಯಕ್ರಿಯೆಯ ದಿನವು ನನ್ನ ಬದುಕಿನ 2ನೇ ಅತ್ಯಂತ ವೇದನೆಯ ದಿನವಾಗಿತ್ತು. ನನ್ನ ಅಜ್ಜಿ ಕೊನೆಯು ಉಸಿರಿನವರೆಗೂ ದೇಶಕ್ಕಾಗಿ ಧೈರ್ಯದಿಂದ ಸೇವೆ ಸಲ್ಲಿಸಿದ್ದಾರೆ’ ಎಂದು ರಾಹುಲ್‌ ವಿಡಿಯೋದಲ್ಲಿ ಹೇಳಿದ್ದಾರೆ.

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರೂ ಇಂದಿರಾ ಗಾಂಧಿಯವರಿಗೆ ಟ್ವಿಟರ್‌ ಮೂಲಕ ಗೌರವ ಸಲ್ಲಿಸಿದ್ದಾರೆ.


Leave a Reply