Please assign a menu to the primary menu location under menu

Technology

ಕೇಳಿ…ಆನಂದಿಸಿ…ರಿಫ್ರೆಶ್ ಹಾಗೂ ರೀಚಾರ್ಜ್: ಉದಯವಾಣಿ ಸಾರಥ್ಯದ UVlisten.com

ಕೇಳಿ…ಆನಂದಿಸಿ…ರಿಫ್ರೆಶ್ ಹಾಗೂ ರೀಚಾರ್ಜ್: ಉದಯವಾಣಿ ಸಾರಥ್ಯದ UVlisten.com

ಕನ್ನಡದ ಜನಪ್ರಿಯ ದೈನಿಕ ಉದಯವಾಣಿಯ ಸಾರಥ್ಯದಲ್ಲಿ ನೂತನವಾಗಿ ಮೂಡಿಬರುತ್ತಿದೆ ಯುವಿ ಲಿಸನ್.ಕಾಮ್(Uv listen.com) ಈಗಾಗಲೇ ತರಂಗ ವಾರಪತ್ರಿಕೆ ಸಂಪಾದಕಿ ಡಾ.ಸಂಧ್ಯಾ ಎಸ್.ಪೈ ಅವರ ಮಧುರ ಧ್ವನಿಯ ಸಂಧ್ಯಾವಾಣಿ ಮಾಲಿಕೆಯಲ್ಲಿ ಪ್ರಿಯ ಓದುಗರೇ, ಮನೋಜ್ಞ ರಾಮಾಯಣದ ಸುಂದರ ಕಥೆಗಳನ್ನು ಕೇಳಿದ್ದೀರಿ. ಇದೀಗ ಮತ್ತೊಂದು ಹೊಸ ಪ್ರಯೋಗದಲ್ಲಿ ಯುವಿ ಅಂತರ್ಜಾಲ ತಾಣ ಹೆಜ್ಜೆ
ಇಟ್ಟಿದ್ದು, ಕಿರುತೆರೆ ನಟ, ಪತ್ರಕರ್ತ, ಸುಮಧುರ ಧ್ವನಿಯ ಬಡೆಕ್ಕಿಲ ಪ್ರದೀಪ್ ಅವರ ಕಂಠದಲ್ಲಿ ರಿಫ್ರೆಶ್ ಹಾಗೂ ರೀಚಾರ್ಜ್ ವಿತ್ ಬಡೆಕ್ಕಿಲ ಪ್ರದೀಪ್ ಹೆಸರಿನ ಮಾಲಿಕೆ ಆರಂಭಗೊಂಡಿದೆ.

ಡಾ.ಸಂಧ್ಯಾ ಎಸ್ ಪೈ ಹಾಗೂ ಬಡೆಕ್ಕಿಲ ಪ್ರದೀಪ್ ಮಧುರ ಕಂಠದಲ್ಲಿ ಈಗಾಗಲೇ ಯುವಿ ಲಿಸನ್ ಡಾಟ್ ಕಾಮ್ ನಲ್ಲಿ ಉತ್ತಮ ಮುಂಜಾನೆಯನ್ನು ಪ್ರಾರಂಭಿಸಲು ಸ್ಫೂರ್ತಿದಾಯಕ ಹಾಗೂ ಪ್ರೇರಣಾತ್ಮಕ ವಿಷಯಗಳನ್ನು ಪಾಡ್ ಕಾಸ್ಟ್ ಮೂಲಕ ಪ್ರಸ್ತುತ ಪಡಿಸುತ್ತಿದ್ದಾರೆ.

ಕರ್ನಾಟಕದ ಪ್ರಸಿದ್ಧ ಧ್ವನಿ ಕಲಾವಿದರಾಗಿರುವ ಬಡೆಕ್ಕಿಲ ಪ್ರದೀಪ್ ಅವರು ತಮ್ಮ ವಿಶಿಷ್ಟ ನಿರೂಪಣೆಯೊಂದಿಗೆ ಅನೇಕ ಪ್ರಸಿದ್ಧ ಕನ್ನಡ ರಿಯಾಲಿಟಿ ಶೋಗಳ ಮೂಲಕ ತಮ್ಮ ಧ್ವನಿಯಿಂದಾಗಿ ಚಿರಪರಿಚಿತರಾಗಿದ್ದಾರೆ. ಇದೀಗ ಉದಯವಾಣಿಯ ನೂತನ ಪ್ರಯೋಗ ರಿಚಾರ್ಚ್ ಹಾಗೂ ರಿಫ್ರೆಶ್ ಎಂಬ ವಿಶಿಷ್ಟ ಪಾಡ್ ಕಾಸ್ಟ್ ಸರಣಿಯಲ್ಲಿ ತಮ್ಮ ಮಧುರ ಕಂಠದ ಮೂಲಕ ಪ್ರಸ್ತುತ ಪಡಿಸುತ್ತಿರುವ ವಿಷಯವನ್ನು ಕೇಳಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವಂತೆ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.


Leave a Reply