ಬೀದರ್: 10 ಕೋಟಿ ಹಣ ಪಡೆದು ಬಸವಕಲ್ಯಾಣದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ನಿಲ್ಲಿಸಿರುವುದು ಮತಗಳನ್ನು ಹೊಡೆಯಲು ಕುಮಾರಸ್ವಾಮಿ ಮಾಡಿರುವ ತಂತ್ರ ಎಂಬ ಶಾಸಕ ಜಮೀರ್ ಅಹ್ಮದ್ ಆರೋಪಕ್ಕೆ ತಿರುಗೇಟು ನಿಡಿರುವ ಮಾಜಿ ಸಿಎಂ ಹೆಚ್.ಡಿ.ಕೆ ಅಲ್ಲಾ ಮೇಲೆ ಗೌರವ ಇದ್ದರೆ 10 ಕೊಟಿ ಪಡೆದದ್ದನ್ನು ಸಾಬೀತು ಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಜಮೀರ್ ಅಹ್ಮದ್ ಗೆ ಪಕ್ಷಕಟ್ಟುವುದು ಮುಖ್ಯವಲ್ಲ ಯಾರ ಯಾರನ್ನೋ ಹಿಡಿದು ರಾಜಕಾರಣ ಮಾಡುವುದು ಮುಖ್ಯ. ಹಿಂದೆ ಚಾಮರಾಜನಗರದಲ್ಲಿ ಬಿಜೆಪಿ ಗೆಲ್ಲಿಸಲು ಇವರನ್ನು ಅಭ್ಯರ್ಥಿಯನ್ನಾಗಿ ನಿಲ್ಲಿಸಿದ್ದೆವಾ? ಅಲ್ಲಾ ಮೇಲೆ ಗೌರವ ಇದ್ದರೆ 10 ಕೋಟಿ ಪಡೆದಿದ್ದು ಸಾಬೀತು ಪಡಿಸಲಿ. ದೇವರೇ ಎಲ್ಲರನ್ನೂ ನೋಡಿಕೊಳ್ಳುತ್ತಾನೆ ಎಂದರು.
ಉಪಚುನಾವಣೆಗಳಲ್ಲಿ ಸಾಮಾನ್ಯವಾಗಿ ಆಡಳಿತ ಪಕ್ಷವೇ ಗೆಲುವು ಸಾಧಿಸುತ್ತದೆ. ಈ ಹಿಂದೆ ಕಾಂಗ್ರೆಸ್ ಕೂಡ ಎರಡು ಉಪಚುನಾವಣೆಯಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ ಕೂಡ ಹಣಚೆಲ್ಲಿ ಚುನಾವಣೆ ನಡೆಸಿತ್ತು. ಉಪಚುನಾವಣೆಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಳ್ಳುವುದು ಸಾಮಾನ್ಯ ಎಂದು ಹೇಳಿದರು.
Discussion about this post