ಮಾಸ್ಕೋ: ಏಪ್ರಿಲ್ 7– ಕಳೆದೊಂದು ವಾರದಲ್ಲಿ ಜಾಗತಿಕ ಕೋವಿಡ್ ಪ್ರಕರಣಗಳ ಸಂಖ್ಯೆ ಶೇ 5ರಷ್ಟು, ಸಾವಿನ ಸಂಖ್ಯೆ ಶೇ 11ರಷ್ಟು ಏರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ, ಡಬ್ಲ್ಯುಎಚ್ಓನ ವಾರದ ವರದಿ ತಿಳಿಸಿದೆ.
‘ಜಾಗತಿಕವಾಗಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಸತತ ಆರನೇ ವಾರವೂ ಏರಿಕೆಯಾಗಿದೆ. ಕಳೆದ ವಾರ ಜಾಗತಿಕವಾಗಿ 40 ಲಕ್ಷ ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಕಳೆದ ವಾರ 71,000 ಹೊಸ ಸಾವು ಪ್ರಕರಣಗಳು ವರದಿಯಾಗುವುದರೊಂದಿಗೆ ಸಾವಿನ ಪ್ರಮಾಣ ಶೇ 11ರಷ್ಟು ಏರಿಕೆಯಾಗಿದೆ.’ ಎಂದು ಡಬ್ಲ್ಯೂಎಚ್ಓ ತಿಳಿಸಿದೆ.
‘ ಪ್ರಕರಣಗಳ ಅತಿ ಹೆಚ್ಚು ಏರಿಕೆ ಆಗ್ನೇಯ ಏಷ್ಯಾದಲ್ಲಿ (ಮುಖ್ಯವಾಗಿ ಭಾರತದಲ್ಲಿ) ಹಾಗೂ ಪಶ್ಚಿಮ ಪೆಸಿಫಿಕ್ ಪ್ರಾಂತ್ಯದಲ್ಲಿ ಆಗುತ್ತಿದೆ. ಆಫ್ರಿಕಾ ಪ್ರಾಂತ್ಯ ಹೊರತುಪಡಿಸಿಎಲ್ಲ ಪ್ರಾಂತ್ಯಗಳಲ್ಲಿ ಸಾವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಆಗ್ನೇಯ ಏಷ್ಯಾ ಪ್ರಾಂತ್ಯದಲ್ಲಿ ಸಾವಿನ ಸಂಖ್ಯೆಯಲ್ಲಿ ಶೇ 46ರಷ್ಟು ಏರಿಕೆಯಾಗಿದೆ.’ ಎಂದು ಸಂಸ್ಥೆಯ ವರದಿ ತಿಳಿಸಿದೆ.
ಜಾಗತಿಕ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ 13 ಕೋಟಿ 40 ಲಕ್ಷ ದಾಟಿದ್ದು, 28 ಲಕ್ಷಕ್ಕೂ ಹೆಚ್ಚು ಮಂದಿ ಈವರೆಗೆ ಸೋಂಕಿಗೆ ಬಲಿಯಾಗಿದ್ದಾರೆ.
Discussion about this post