ನವದೆಹಲಿ: ಮಾರ್ಚ್ ನಲ್ಲಿ ಜಿಎಸ್ಟಿ ಸಂಗ್ರಹ ಶೇಕಡ 27ರ ಷ್ಟು ಹೆಚ್ಚಳವಾಗಿ ದಾಖಲೆಯ 1.24 ಲಕ್ಷ ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ.
ಮಾರ್ಚ್ ನಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ಸಾರ್ವಕಾಲಿಕ ಗರಿಷ್ಠ 123.902 ಕೋಟಿ ರೂ.. ಸಂಗ್ರಹವಾಗಿದೆ. ತ್ವರಿತ ಆರ್ಥಿಕ ಚೇತರಿಕೆ ಆಗಿರುವುದು ಕಂಡುಬಂದಿದೆ.
ಸರಳೀಕೃತ ನಿಯಮಗಳು, ತೆರಿಗೆ ವಂಚನೆ ಪರಿಶೀಲಿಸಲು ತಂತ್ರಜ್ಞಾನ ಬಳಕೆಯಿಂದ ಜಿಎಸ್ಟಿ ಸಂಗ್ರಹ ಹೆಚ್ಚಳವಾಗಿದೆ. ಕಳೆದ ತಿಂಗಳಿಗೆ ಆದಾಯಕ್ಕಿಂತ ಶೇಕಡಾ 9.5 ರಷ್ಟು ಹೆಚ್ಚಾಗಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.
Discussion about this post