ಕೃಷಿ ಕ್ಷೇತ್ರದಲ್ಲಿ ಲಾಭವನ್ನ ಪಡೆಯಬೇಕು ಅಂದರೆ ರೈತರು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲೇಬೇಕು. ಅದರಲ್ಲೂ ನಮ್ಮ ದೇಶದಲ್ಲಂತೂ ರೈತರು ಕೃಷಿ ಕ್ಷೇತ್ರದಲ್ಲಿ ಲಾಭವನ್ನ ಪಡೆಯಬೇಕು ಅಂದರೆ ದೊಡ್ಡ ಸಾಹಸವನ್ನೇ ಮಾಡಬೇಕು.
ಇದೇ ರೀತಿಯಲ್ಲಿ ಬಿಹಾರದ ರೈತನೊಬ್ಬ ವಿಶ್ವದ ದುಬಾರಿ ತರಕಾರಿಯನ್ನ ಬೆಳೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಬಿಹಾರದ ಔರಂಗಾಬಾದ್ ಜಿಲ್ಲೆಯ ಕರಮ್ದಿಹ್ ಗ್ರಾಮದ 38 ವರ್ಷದ ರೈತ ಅಮರೇಶ್ ಸಿಂಗ್ ಎಂಬವರು 2.5 ಲಕ್ಷ ರೂಪಾಯಿ ವ್ಯಯಿಸಿ ಹಾಪ್ಶೂಟ್ಸ್ ಬೆಳೆಗಳನ್ನ ಬೆಳೆದಿದ್ದಾರೆ. ಇದು ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಣುವ ಬೆಳೆಯಾಗಿದೆ. ಅಮರೇಶ್ ತಮ್ಮ 5 ಎಕರೆ ಜಾಗದಲ್ಲಿ ಯಾವುದೇ ರಾಸಾಯನಿಕಗಳನ್ನ ಬಳಕೆ ಮಾಡದೇ ಈ ಬೆಳೆಯನ್ನ ಬೆಳೆದಿದ್ದಾರೆ.
ಕೃಷಿ ವಿಜ್ಞಾನಿ ಡಾ. ಲಾಲ್ ಮಾರ್ಗದರ್ಶನದಲ್ಲಿ ವಾರಣಾಸಿಯ ಭಾರತೀಯ ತರಕಾರಿ ಸಂಶೋಧನಾ ಸಂಸ್ಥೆಯಲ್ಲಿ ಈ ಹಾಪ್ ಶೂಟ್ಸ್ನ್ನು ಬೆಳೆದಿದ್ದಾರೆ.
ಇಲ್ಲಿಂದಲೇ ಬೀಜಗಳನ್ನ ತಂದು ಅಮರೇಶ್ ಸಸಿಗಳನ್ನ ಬೆಳೆಸಿದ್ದಾರೆ ಎನ್ನಲಾಗಿದೆ. ಇದನ್ನ ಬಿಯರ್ಗಳ ತಯಾರಿಕೆಯಲ್ಲಿ ಬಳಸಲಾಗುತ್ತೆ. ಹಾಗೂ ಸಸಿಯ ಕೊಂಬೆಯನ್ನ ಔಷಧಿ ಹಾಗೂ ಆಹಾರ ಪದಾರ್ಥವಾಗಿ ಬಳಕೆ ಮಾಡ್ತಾರೆ.
ಐಪಿಎಸ್ ಅಧಿಕಾರಿ ಸುಪ್ರಿಯಾ ಸಾಹು ಅಮರೇಶ್ರ ಈ ಕತೆಯನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಮಾತ್ರವಲ್ಲದೇ ಯುವ ಕೃಷಿಕನ ಈ ಅನ್ವೇಷಣೆಯನ್ನ ಕೊಂಡಾಡಿದ್ದಾರೆ.
Discussion about this post